ಸಮೀರಾಚಾರ್ಯ ಶರ್ಟ್ ಹರಿದು, ಏಕವಚನ ಪ್ರಯೋಗ ಮಾಡಿದ ಜಗನ್! ''ನಿಮಗೆ ಆಟದಲ್ಲಿ ಸೀರಿಯಸ್ ನೆಸ್ ಇಲ್ಲ'' ಎಂದು ಕೆಲವೇ ಕೆಲವು ದಿನಗಳ ಹಿಂದೆ ಸಮೀರಾಚಾರ್ಯ ರವರಿಗೆ ಭೋದನೆ ಮಾಡಿದ ಜಗನ್ ಇದೀಗ ಆಟದಲ್ಲಿ ಓವರ್ ಸೀರಿಯಸ್ ಆಗಿ ಅದೇ ಸಮೀರಾಚಾರ್ಯ ರವರ ಶರ್ಟ್ ಹರಿದು ಹಾಕಿದ್ದಾರೆ. ಸಾಲದಕ್ಕೆ, ಸಮೀರಾಚಾರ್ಯ ಮೇಲೆ ಏಕವಚನ ಪ್ರಯೋಗ ಮಾಡಿದ್ದಾರೆ ಮಿಸ್ಟರ್ ಜಗನ್ನಾಥ್ ಚಂದ್ರಶೇಖರ್. ಅಷ್ಟಕ್ಕೂ, ಇದೆಲ್ಲ ಆಗಿದ್ದು 'ಜ್ಯೂಸ್ ಬೇಕು' ಟಾಸ್ಕ್ ನಲ್ಲಿ. ಆಟದ ನಿಯಮಗಳ ಅನುಸಾರ, ಎದುರಾಳಿ ತಂಡದ ಕಬ್ಬನ್ನು ಕದಿಯಲು ಸಮೀರಾಚಾರ್ಯ ಮುಂದಾದಾಗ, ಸಮೀರಾಚಾರ್ಯ ರನ್ನ ತಡೆಯುವ ಭರದಲ್ಲಿ ಅವರ ಶರ್ಟ್ ಹರಿದು ಹಾಕಿದ್ದಾರೆ ಜಗನ್. ಮನೆಯ ಸದಸ್ಯರಲ್ಲಿರುವ ಸಹಕಾರ ಮನೋಭಾವನೆ, ಹೊಂದಾಣಿಕೆ, ಒಗ್ಗಟ್ಟು ತಿಳಿಯುವ ಸಲುವಾಗಿ 'ಬಿಗ್ ಬಾಸ್' ಈ ವಾರ 'ಒಗ್ಗಟ್ಟಿನಲ್ಲಿ ಬಲವಿದೆ' ಎಂಬ ಲಕ್ಷುರಿ ಬಜೆಟ್ ಟಾಸ್ಕ್ ನೀಡಿದರು. ಇದರಲ್ಲಿ, ಎರಡು ತಂಡಗಳು ಕಾಲ ಕಾಲಕ್ಕೆ ನೀಡುವ ಸವಾಲಿನ ಅನುಸಾರ ಹಣ ಗಳಿಸಬಹುದು. ಟಾಸ್ಕ್ ಅಂತ್ಯದಲ್ಲಿ ಅತಿ ಹೆಚ್ಚು ಹಣ ಹೊಂದಿರುವ ತಂಡ ಜಯಶಾಲಿ ಆಗಲಿದೆ.